Wednesday 9 January 2013






ಮಗಳೇ




ನಿನ್ನೆ  ಮೊನ್ನೆಯಷ್ಟೇ ನನ್ನ ಸೆರಗ ಹಿಡಿದು
ರಸ್ತೆ ದಾಟುತಿದ್ದೆ.
ಹೌದು,
ನಿನ್ನೆ ಮೊನ್ನೆಯಷ್ಟೇ ಅಮ್ಮ ಚ್ವಾಕಿ ಬೇಕು ಐಸ್ಸಿ ಬೇಕು                    
ಎಂದು ಸೆರಗ ಹಿಡಿದು ಕೇಳುತಿದ್ದೆ,
ನಿನ್ನ ತೊದಲ ನುಡಿಗಳಲ್ಲೆ,
ಮುದ್ದು ಮಗಳೆ
ಎಷ್ಟು ಬೇಗ ಬೆಳೆದೆ, ಗೊತ್ತೇ ಆಗಲಿಲ್ಲ ನನಗೆ.
ಒಂದು ದಿನವೂ ಯಾಕೆ ಹೀಗೆ
ಇವಳು  ಎಂದು ಗೊಣಗಲು
ಬಿಡದೆ,
ಒಂದಿನಿತು ಹಠವ ಮಾಡದೇ ಎಷ್ಟು ಬೇಗ ಬೆಳೆದೆ,
ಗೊತ್ತೇ ಆಗಲಿಲ್ಲ ನನಗೆ.
ಅಪ್ಪ ಸದಾ ದೂರದಲ್ಲಿ ಕೆಲಸದಲ್ಲಿದ್ದರೂ, ಬಾಲ್ಯವೆಲ್ಲ ಅಮ್ಮನೊಡನೆ ನಗುತ ಕಾಲ ಕಳೆದೆ.
ಆದರೂ ಮಗಳೆ ನೀನು ಎಷ್ಟು ಬೇಗ ಬೆಳೆದೆ,
ಗೊತ್ತೇ ಆಗಲಿಲ್ಲ ನನಗೆ.
ಇನ್ನು ಎತ್ತರ ಬೆಳೆವ ಆಸೆ ನಿನಗೆ,
ಬದುಕಿನಲ್ಲಿ ಹೋಗು ನೀ ಎತ್ತರೆತ್ತರಕ್ಕೆ.
ಅದುವೆ ನಮ್ಮ ಹಾರೈಕೆ.

5 comments:

  1. ಮಕ್ಕಳು ಬೆಳೆಯುವ ಖುಷಿ ವರ್ಣಿಸಲು ಅಸಾಧ್ಯ.. ಅಲ್ಲವಾ?

    ಚಂದದ ಭಾವಗಳನ್ನು ಶಬ್ಧದಲ್ಲಿ ಬಿಡಿಸಿಟ್ಟಿದ್ದೀರಿ...

    ಸುಳ್ಳು ಹೇಳುವ
    ಕನ್ನಡಿ...
    ಹಣ್ಣು ಕೂದಲು ತೋರಿಸಿ ಅಣಕಿಸಿತು....
    ಮಗನ
    ಚಿಗುರು ಮೀಸೆ
    ತುಂಟ ನಗು ನಕ್ಕಿತ್ತು...

    ReplyDelete
    Replies
    1. ಧನ್ಯವಾದಗಳು ಪ್ರಕಾಶಣ್ಣ.

      Delete
  2. ಪುಟ್ಟಿಗೆ ಜನುಮ ದಿನದ ಶುಭಾಶೀರ್ವಾದಗಳು...

    ReplyDelete
  3. ಮಕ್ಕಳು, ತೆಂಗಿನ ಮರ ನೋಡು ನೋಡುತ್ತಲೇ ಬೆಳೆಯುತ್ತ ಹೋಗುತ್ತವೆ..ಆ ಬೆಳವಣಿಗೆಯಲ್ಲಿ ಆಗುವ ಬದಲಾವಣೆ, ಅದನ್ನು ನೋಡುತ್ತಾ ಮತ್ತೊಮ್ಮೆ ಹಿಂದಿರುಗಿ ನೋಡುವಾಗ ಸಿಗುವ ಆನಂದ..ಅವರ್ಣನೀಯ ...ಸುಂದರ ಸಾಲುಗಳು

    ReplyDelete
    Replies
    1. ನಿಮ್ಮ ಕಾಮೆಂಟ್ ನಿಮ್ಮ ಬರಹಗಳಂತೆ ಸುಂದರವಾಗಿದೆ. ಧನ್ಯವಾದಗಳು. ಶ್ರೀಕಾಂತ್ ರವರೆ...

      Delete