Tuesday 4 September 2012

                    ಶ್ರೀ ಗುರುಭ್ಯೋನಮಃ
        ನಾನು ಮಾರಿಕಾಂಬ ಜೂನಿಯರ್ ಕಾಲೇಜ್ ನಲ್ಲಿ ೧೦ನೇ ತರಗತಿಯಲ್ಲಿ ಇರುವಾಗ ನಡೆದ ಘಟನೆಯನ್ನು ಈ ದಿನ ನೆನಪಿಸಿಕೊಳ್ಳಲು ಇಶ್ಚಿಸುತ್ತೇನೆ.
       ಆಗ ತಾನೆ ಹೊಸದಾಗಿ ನಮ್ಮ ತರಗತಿಗೆ ಸಮಾಜ ವಿಜ್ಞಾನ ವಿಷಯ ಕಲಿಸಲು ಬಂದ ಶ್ರೀಮತಿ ನಿರ್ಮಲ ಟೀಚರ್ ಗೂ ಮತ್ತು ಮಕ್ಕಳಿಗೂ ಒಬ್ಬರಿಗೊಬ್ಬರು  ಹೊಂದಿಕೊಳ್ಳಲು ಕಷ್ಟವಾಗುತ್ತಿತ್ತು.
        ಹೀಗಿರುವಾಗ ಮೊದಲ ಕಿರು ಪರೀಕ್ಷೆಯಲ್ಲಿ ಅವರ ವಿಷಯಕ್ಕೆ ಎಲ್ಲರಿಗೂ ಕಡಿಮೆ  ಅಂಕಗಳು ದೊರೆತವು. ಬೇಕೆಂದೇ ಹೀಗೆ ಮಾಡಿರಬೇಕು ಎಂದು ಯೋಚಿಸಿದ ನಾವುಗಳು ಒಂದು ಪೇಪರ್ ನಲ್ಲಿ ಎಲ್ಲರು ಸಹಿ ಮಾಡಿ ಅವರ ಬಗ್ಗೆ  ಪ್ರಾಂಶುಪಾಲರಲ್ಲಿ ದೂರು  ಕೊಟ್ಟೆವು. 
       ನಂತರ ಪ್ರಾಂಶುಪಾಲರು ಯಾವ ರೀತಿ ಅದಕ್ಕೆ ಪ್ರತಿಕ್ರಿಯಿಸಿದರೋ ಗೊತ್ತಿಲ್ಲ.
ಆದರೆ
        ಮರುದಿನ  ನಮ್ಮ ಕ್ಲಾಸ್ ಟೀಚರ್  ಆದ  ಶ್ರೀ ವಿ. ಎನ್. ಹೆಗಡೆ.(ಗಣಿತ  ಮತ್ತು ವಿಜ್ಞಾನ ) ಸರ್ ಬಂದು ಪಾಠ ಮಾಡದೇ ಸುಮ್ನೆ ನಿಂತಾಗ ನಮಗೆಲ್ಲ ಭಯ ಏನಾದರು ಇವರು ಬೈದು ಕ್ಲಾಸ್ ನಿಂದ ಹೊರಗೆ ಕಳುಹಿಸುತ್ತಾರಾ (ಎಂದೂ ಹಾಗೆ ಮಾಡಿದವರಲ್ಲ) ಎಂದು. ಆದರೆ ಶಾಂತವಾಗಿ ಅವರು  ನೀವು ನನ್ನ ಕ್ಲಾಸ್ ಮಕ್ಕಳು  ಅಂತ ನಂಗೆ ಹೆಮ್ಮೆ ಯಿಂದ ಹೇಳಿಕೊಳ್ಳೋ ಅವಕಾಶ ಕಳೆದು ಬಿಟ್ರಿ, ನೀವು ಮಾಡಿದ್ದು ನಿಮಗೆ ಸರಿ ಅನ್ನಿಸಬಹುದು. ನಿಮಗಿನ್ನು ಬುದ್ದಿ ಬೆಳೆದಿಲ್ಲ. ಒಮ್ಮೆ ನೀವು ಶ್ರೀಮತಿ ನಿರ್ಮಲ ಟೀಚರ್ ಮನಸ್ಸಿಗೆ ನೋವು ಆಗಬಹುದಾ ಅಂತ ಯೋಚನೆ ಮಾಡಬೇಕಿತ್ತು . 

        ಅವರು ಒಂದು ಹೆಣ್ಣು ಅವರಿಗೂ ನಿಮ್ಮಂತೆ ಮಕ್ಕಳು ಇದ್ದಾರೆ. ನಿಮ್ಮ  ಒಳ್ಳೆಯದಕ್ಕೆ ಅವರು ಯೋಚಿಸುತ್ತಿರುತ್ತಾರೆ. ಹೆಣ್ಣನ್ನ ಗೌರವದಿಂದ ಕಾಣಬೇಕು ಎಂದು ತಿಳಿ ಹೇಳಿದರು. ಮತ್ತು  ಯಾರಿಗಾದರೂ  ನೋವು ಕೊಟ್ಟು ಪಡೆಯುವ ಸುಖ ನಿಮಗೆ  ಸಂತೋಷವನ್ನು ಕೊಡೋದಿಲ್ಲ.” ಅಂತ ತಿಳಿಸಿ  ಹೇಳಿದರು.
ಆ ಮಾತು ಇಂದಿಗೂ ನನಗೆ ನೆನಪಾಗುತ್ತಿರುತ್ತದೆ. 
              ಈ ಮೂಲಕ ಶ್ರೀಮತಿ ನಿರ್ಮಲ ಟೀಚರ್ ಕ್ಷಮೆ ಮತ್ತೊಮ್ಮೆ ಎಲ್ಲರ ಪರವಾಗಿ ಕೇಳುತ್ತೇನೆ.
              ಹಾಗೂ ಶ್ರೀ ವಿ. ಎನ್. ಹೆಗಡೆ  ಸರ್  ಗೆ ಕ್ರತಜ್ನತೆ ಅರ್ಪಿಸುತ್ತೇನೆ.   

4 comments:

  1. Heart touching ....

    keep writting .....

    ReplyDelete
  2. aagatte....
    eeglaadrU sorry keLidralla...avarige muTTatte....

    keep writing.....

    ReplyDelete
  3. ಹುಡುಗಾಟ ಆ ವಯೋಮಾನದಲ್ಲಿ ನಮ್ಮ ಯೋಚನಾ ಲಹರಿ..ಒಂದೇ ದಿಕ್ಕಿನಲ್ಲಿರುತ್ತೆ..ಸೈ ಅನಿಸಿದ್ದು ಸರಿ...ಅಷ್ಟೇ ಮನಸಿಗೆ ಬರುವುದು...ಒಳ್ಳೆಯ ಬರಹ..ಶಾಲಾದಿನಗಳನ್ನ ಹಾಗೆ ಪರದೆಯ ಮುಂದೆ ಇಟ್ಟಂಗೆ ಆಯಿತು..ಅಭಿನಂದನೆಗಳು..

    ReplyDelete
  4. ರಾಜಿಯವರಿಗೆ ಬ್ಲಾಗ್ ಲೋಕಕ್ಕೆ ಶುಭಸ್ವಾಗತ, ಒಳ್ಳೆಯ ಮೆಲುಕು.
    ಶಾಲಾದಿನಗಳ ಪುಂಡಾಟಿಕೆ, ಸಂಭ್ರಮದ ಬಗ್ಗೆ ಹಲವರು ತಿಳಿಸಿದ್ದಾರೆ, ಕವನಿಸಿದ್ದಾರೆ ಆದರೆ ಎಲ್ಲವೂ ವಿಭಿನ್ನ ವಿಶಿಷ್ಟ ಮತ್ತು ಹಂಚಿಕೊಳ್ಳಬೇಕಾದ ಅನುಭವ. ಶುಭವಾಗಲಿ.

    ReplyDelete