Tuesday 31 January 2012

ಕನಸ ಕರಗಿಸಲಾರೆ


 ಕನಸ ಕರಗಿಸಲಾರೆ
ಕನಸ ಕರಗಿಸಲಾರೆ
ಕಾಲನಾ ಕರಗಂಟೆ ಕರೆಯುವವರೆಗೆ
ಬಸುರಿಂದ ಟಿಸಿಲೊಡೆದು
ಬಂದಂದಿನಿಂದಲೂ ನನ್ನುಸಿರು ಈ ಕನಸು
              ಕನಸ ಕರಗಿಸಲಾರೆ
ಹಸಿರುಸಿರು ವನಹಸಿರು
ಮನ ಬಂದಂತೆ ತೇಲುವ ಹಕ್ಕಿ
ಅದಕಿಲ್ಲದಿರೆ ಬಂಧ
ಅದರಂತೆ ನನ್ನ ಕನಸು ನಿರ್ಬಂಧ
               ಕನಸ ಕರಗಿಸಲಾರೆ
ಅಮ್ಮನಿಲ್ಲದಿರೆ ಕೊರಗೇಕೆ?
ಅಪ್ಪನಿಲ್ಲದಿರೆ ಭಯವೇಕೆ?
ಕನಸ ಕರೆಯುವೆನು ಕಣ್ಣ ಅಂಗಳಕೆ,
ಅಮ್ಮ ನೀಡುವ ತುತ್ತ ತಿನ್ನುವ ಬಯಕೆ.
ಅಪ್ಪನ ಸಾವಿರ ಹಾರೈಕೆ, ಹೆಬ್ಬಯಕೆ
ರೆಪ್ಪೆಯಡಿ ಮುಚ್ಚಿಡುವೆ
             ಕನಸ ಕರಗಿಸಲಾರೆ.
ಬಿಡಲಾರೆ ಈ ಕನಸ ನನ್ನ ತೊರೆಯಲು,
ಸುತ್ತುವೇನು ಯಮಪಾಶ,
ಸುತ್ತಿದಂತೆ ಮಾರ್ಕಂಡೇಯನ ಕೊರಳು.
ನನಸಾಗದಿರೆ ಚಿಂತೆಯಿಲ್ಲ, 
ಕಟ್ಟಲಾರೆ ಕನಸಿನ ಚಿತೆಯನ್ನ.
            ಕನಸ ಕರಗಿಸಲಾರೆ.

2 comments:

  1. ಬಹಳ ಸುಂದರ ಸಾಲುಗಳು...

    ಪ್ರತಿ ಸಾಲಿನಲ್ಲೂ ಭಾವಗಳು ಗಮನ ಸೆಳೆಯುತ್ತವೆ..

    keep writting....

    ReplyDelete
    Replies
    1. ಧನ್ಯವಾದಗಳು..ಬ್ಲಾಗ ಗೆ ಮೊದಲ ಹೆಜ್ಜೆ ಇಟ್ಟಿರುವೆ ನಿಮ್ಮೆಲ್ಲರ ಪ್ರೋತ್ಸಾಹ ಸದಾ ಇರಲಿ..

      Delete