ಭಕ್ತಿ ಕೊಡೆ ಮಾರಿಕಾಂಬೆ ನಾನು ಬೇಡುವೆ
ಭಕ್ತಿ ಇಂದ ಮುಕ್ತಿ ಪಡೆದು ಧನ್ಯನಾಗುವೆ
ಶಿರಸಿ ನಗರದಿ ನೀನು ನೆಲಸಿರುವೆ
ಜನರೆಲ್ಲರನು ನೀನು ಕಾಪಾಡುವೆ
ಸಹ್ಯಾದ್ರಿಯಾ ಶಿಖರದಿ ನಿಂತಿರುವ ತಾಯೇ
ಮಹಿಷಾಸುರ ಮರ್ಧಿನಿ ನೀ ಎನ್ನ ಕಾಯೆ
ಬರುತಿಹುದು ವರ್ಷ ಬಿಟ್ಟು ವರುಷ ನಿನ್ನಯ ಜಾತ್ರೆ
ಹಲವೆಡೆ ಹರಡಿರುವ ಜನರಿಗೆ ನಿನ್ನೆಡೆ ಯಾತ್ರೆ
ಭಯ ಭಕುತಿ ತರುತಿಹುದು ನಿನ್ನ ಆ ಚರಿತ್ರೆ
ಹಲವರು ಭಕುತರು ನಿನ್ನೆಡೆ ಬರುತಿಹರು
ಹರಕೆ ಹೊತ್ತು ತರುತಿಹರು
ಫಲಿಸು ನೀನು ಅವರ ವರಗಳನು
ನಿನ್ನೆಡೆಯಲ್ಲಿ ನಾ ಬೇಡುತಿರುವೆನು
ಸುತ್ತಲಿರುವ ಗ್ರಾಮಕೆ ದೇವಿ ನೀನು
ನಿನ್ನೆಡೆಯಿರುವ ನಾನೆ ಧನ್ಯ
Well Come to blog loka......
ReplyDeleteAll the best koose...